ಮೃತರ ಕುಟುಂಬಕ್ಕೆ ಕಡಿಮೆ ಪರಿಹಾರ: ಸಂಸದೆ ರಮ್ಯಾಗೆ ತರಾಟೆ

ವೆಬ್‌ದುನಿಯಾ| Last Modified ಮಂಗಳವಾರ, 31 ಡಿಸೆಂಬರ್ 2013 (13:24 IST)
PR
PR
ಮೈಸೂರು: ಮಂಡ್ಯ ಜಿಲ್ಲಾ ಆಸ್ಪತ್ರೆಗೆ ರಮ್ಯಾ ಭೇಟಿಯಾಗಿದ್ದಾಗ ಸಂಬಂಧಿಕರು, ಜೆಡಿಎಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಡಿ.28ರಂದು ಸಾತನೂರು ಬಳಿ ಬಸ್ ಉರುಳಿಬಿದ್ದು, ಐವರು ಮೃತಪಟ್ಟಿದ್ದರು. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸೇರಿದ್ದ ಗಾಯಾಳುಗಳ ಭೇಟಿಗೆ ರಮ್ಯಾ ಬಂದಿದ್ದಾಗ ಜೆಡಿಎಸ್ ಸದಸ್ಯರು ರಮ್ಯಾ ಜತೆ ವಾಗ್ವಾದ ನಡೆಸಿದರು. ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರವನ್ನು ನೀಡಬೇಕೆಂದು ಜೆಡಿಎಸ್ ಸದಸ್ಯರು ಆಗ್ರಹಿಸಿದರು.


ಇದರಲ್ಲಿ ಇನ್ನಷ್ಟು ಓದಿ :