Widgets Magazine

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ವೆಬ್‌ದುನಿಯಾ| Last Modified ಬುಧವಾರ, 9 ಏಪ್ರಿಲ್ 2014 (19:56 IST)
PR
PR
ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ಕಾಂಗ್ರೆಸ್ 20 ಸೀಟುಗಳನ್ನು ಗಳಿಸುತ್ತದೆ. ಶೇ. 90ರಷ್ಟು ಮತದಾನವಾದರೆ, ಜನಾರ್ದನ ಪೂಜಾರಿ ಅವರು ಒಂದು ಲಕ್ಷ ಮತಗಳ ಅಂತರದಿಂದ ಗೆಲ್ತಾರೆ ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಭವಿಷ್ಯ ನುಡಿದಿದ್ದಾರೆ. ಪೂಜಾರಿ ಪರ ಕಸ್ಬಾ ಬೇಂಗ್ರೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ಇಬ್ರಾಹಿಂ ಮಾತನಾಡುತ್ತಿದ್ದರು.ಬಿಜೆಪಿ ಮುಖಂಡರಾದ ಪ್ರಹ್ಲಾದ್ ಜೋಷಿ ಮತ್ತು ಅನಂತಕುಮಾರ್ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಗುತ್ತದೆ ಎಂದು ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿ ಯಾವು ಸಿದ್ಧಾಂತ ಉಳಿದಿಲ್ಲ. ಅಡ್ವಾಣಿ, ಜೋಷಿ, ಜಸ್ವಂತ್ ಸಿಂಗ್, ಸುಷ್ಮಾ ಸ್ವರಾಜ್ ಎಲ್ಲರನ್ನೂ ಮೂಲೆಗೆ ತಳ್ಳಿದರು ಎಂದು ಹೇಳಿದರು.ಗುಜರಾತ್ ಮಾದರಿ ಎಂದರೇನು ಎಂದು ಪ್ರಶ್ನಿಸಿದ ಅವರು ಶೇ. 55 ಬಾಲಕಿಯರು ಗುಜರಾತಿನಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಅವರು ಸೌಂದರ್ಯ ಪ್ರಜ್ಞೆಯುಳ್ಳವರಾಗಿದ್ದಾರೆ ಎಂದು ಮೋದಿ ಬೇಜವಾಬ್ದಾರಿ ಉತ್ತರ ಕೊಡ್ತಾರೆ ಎಂದು ಇಬ್ರಾಹಿಂ ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :