ಯುಪಿಎ ಭ್ರಷ್ಟಾಚಾರಗಳಿಗೆ ನೀವು ಪರವಾಗಿದ್ದೀರಾ? ನಿಲೇಕಣಿಗೆ ಅನಂತ್‌ಕುಮಾರ್ ಪ್ರಶ್ನೆ

ಬೆಂಗಳೂರು| ವೆಬ್‌ದುನಿಯಾ| Last Modified ಶನಿವಾರ, 11 ಜನವರಿ 2014 (12:44 IST)
PR
PR
ವಿಶಿಷ್ಠ ಗುರುತಿನ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಬೆಂಗಳೂರು ದಕ್ಷಿಣ ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆಂಬ ವಿಚಾರ ತಿಳಿದು ಬಿಜೆಪಿ ಮುಖಂಡ ಅನಂತಕುಮಾರ್ ನಿಲೇಕಣಿ ಅವರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ನಿಲೇಕಣಿಯವರೇ ನೀವು ಬೆಲೆ ಏರಿಕೆ ಪರವಾಗಿದ್ದೀರಾ ಅಥವಾ ವಿರುದ್ಧವಾಗಿದ್ದೀರಾ. ಯುಪಿಎ ಅವಧಿಯ ಭ್ರಷ್ಟಾಚಾರಗಳಿಗೆ ಪರವಾಗಿದ್ದೀರಾ. 10 ವರ್ಷದಲ್ಲಿ ನಿಮ್ಮ ಸಾಧನೆ ಏನು ಎಂದು ಅನಂತಕುಮಾರ್ ಪ್ರಶ್ನಿಸಿದ್ದಾರೆ. 10 ವರ್ಷಗಳಿಂದ ಯಾವ ವಿಚಾರಕ್ಕೆ ಧ್ವನಿಎತ್ತಿದ್ದೀರಿ. ಇದು ವ್ಯಕ್ತಿ-ವ್ಯಕ್ತಿಗಳ ನಡುವೆ ಚುನಾವಣೆಯಲ್ಲ. ಇದು ವಿಷಯಾಧಾರಿತ ಚುನಾವಣೆಯಾಗಿದೆ ಎಂದು ಬೆಂಗಳೂರಿನಲ್ಲಿ ಸಂಸದ ಅನಂತಕುಮಾರ್ ಹೇಳಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :