ರಮ್ಯಾಗೆ ಬೆಂಬಲಿಸುವ ವಿಚಾರದಲ್ಲಿ ರೈತ ಸಂಘದಲ್ಲಿ ಭಿನ್ನಾಭಿಪ್ರಾಯ

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
PR
ಮಂಡ್ಯ: ಮಂಡ್ಯದ ಚುನಾವಣಾ ಕಣ ರಂಗೇರುತ್ತಿದ್ದು, ರಮ್ಯಾ ಅವರನ್ನು ಬೆಂಬಲಿಸುವ ವಿಚಾರದಲ್ಲಿ ಜಿಲ್ಲಾ ರೈತಸಂಘದಲ್ಲಿ ಬಣ ರಾಜಕೀಯ ಉಂಟಾಗಿದೆ. ಕಾರ್ಯಕರ್ತರೊಂದಿಗೆ ಚರ್ಚಿಸದೇ ರಮ್ಯಾಗೆ ಬೆಂಬಲಿಸಲಾಗಿದೆ ಎಂದು ರಾಜ್ಯ ಸಮಿತಿ ಸದಸ್ಯ ಮಂಜೇಶ್ ಗೌಡ ಆರೋಪಿಸಿದ್ದಾರೆ. ಮುಖಂಡರು ಕಾರ್ಯಕರ್ತರ ಅಭಿಪ್ರಾಯ ಪಡೆಯದೇ ಏಕಾಏಕಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ನಡುವೆ ಮಂಜೇಶ್ ಗೌಡ ರೈತ ಸಂಘದ ವಿರೋಧಿಗಳು, ಅವರು ಜೆಡಿಎಸ್ ಏಜೆಂಟರಾಗಿದ್ದು, ಅವರು ಸದಸ್ಯರೇ ಅಲ್ಲ ಎಂದು ರೈತ ಸಂಘ ಹೇಳಿದೆ.


ಇದರಲ್ಲಿ ಇನ್ನಷ್ಟು ಓದಿ :