ಶ್ರೀರಾಮುಲು ಮತ್ತು ಯಡ್ಯೂರಪ್ಪ ಬಿಜೆಪಿಗೆ ಬರೋದು ಪಕ್ಕಾ : ಕೆಎಸ್‌ ಈಶ್ವರಪ್ಪ

ಶಿವಮೊಗ್ಗ | ಗಿರಿಧರ್|
PR
PR
ವರದಿ : ಶೇಖರ್‌ ಪೂಜಾರಿ

ಮಾನ್ಯ ಯಡ್ಯೂರಪ್ಪನವರು ಬಿಜೆಪಿಗೆ ಬರ‍್ತಾರೆ. ಅಷ್ಟೆ ಅಲ್ಲ, ಅವರ ಜೊತೆಗೆ ಬಿಎಸ್‌ಆರ್‌ ಪಕ್ಷದ ಶ್ರೀರಾಮುಲು ಕೂಡ ಮರಳಿ ಬಿಜೆಪಿ ಸೇರಲಿದ್ದಾರೆ. ಕೇಂದ್ರದ ನಾಯಕರು ಯಡ್ಯೂರಪ್ಪನವರ ಪರವಾಗಿ ಒಲವು ತೋರಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮತ್ತು ಶ್ರೀರಾಮುಲು ಬಿಜೆಪಿ ಪಕ್ಷದಲ್ಲಿ ಇರೋದನ್ನು ನೀವೇ ನೋಡ್ತೀರ" ಎಂದು ಬಿಜೆಪಿ ಮುಖಂಡ ಕೆಎಸ್‌ ಈಶ್ವರಪ್ಪ ಹೇಳಿದ್ದಾರೆ.

ಯಡ್ಯೂರಪ್ಪನವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ಹಲವರು ತಿಂಗಳುಗಳಿಂದ ನಡೆಯುತ್ತಲೇ ಇದೆ. ಅದ್ರೆ ಈ ಬಗ್ಗೆ ಕೇಂದ್ರದ ನಾಯಕರು ಮಾತ್ರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ. ಹೀಗಿದ್ದಾಗ್ಯೂ, ರಾಜ್ಯ ಬಿಜೆಪಿ ನಾಯಕರ ಕನಸುಗಳು ಮಾತ್ರ ಭಗ್ನವಾಗಿಯೇ ಇಲ್ಲ. ಯಡ್ಯೂರಪ್ಪ ಬಿಜೆಪಿಗೆ ಬಂದೇ ಬರ‍್ತಾರೆ. ಅಷ್ಟೆ ಅಲ್ಲ ಶ್ರೀರಮುಲು ಕೂಡ ಬಿಜೆಪಿ ಸೇರುವುದು ಪಕ್ಕಾ ಆಗಿದೆ. ಇವರಿಬ್ಬರೂ ಪಕ್ಷದತ್ತ ಮರಳಿ ಬರುವುದರ ಬಗ್ಗೆ ಕೇಂದ್ರ ನಾಯಕರು ಒಲವು ತೋರಿದ್ದಾರೆ ಎಂದು ಈಸ್ವರಪ್ಪ ಸಂತಸ ವ್ಯಕ್ತಪಡಿಸಿದ್ರು.


ಇದರಲ್ಲಿ ಇನ್ನಷ್ಟು ಓದಿ :