Widgets Magazine

ಸಚಿನ್‌ಗೆ ಭಾರತರತ್ನ, ಕಾಂಗ್ರೆಸ್ ಓಟ್ ಬ್ಯಾಂಕ್ ರಾಜಕಾರಣ: ಬಿದರಿ

ವೆಬ್‌ದುನಿಯಾ|
PR
PR
ಹುಬ್ಬಳ್ಳಿ: ನೇಣು ಹಾಕಿ ಕೊಲ್ಲುವುದು ನಾಲ್ಕು ಗೋಡೆಗಳ ನಡುವೆ ಆಗುತ್ತದೆ. ಯಾರಿಗೂ ಕಾಣುವುದಿಲ್ಲ. ಸಾರ್ವಜನಿಕವಾಗಿ ಗುಂಡಿಕ್ಕಿ ಕೊಂದರೆ ಎಲ್ಲರಿಗೂ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ತಾವು ಆ ಹೇಳಿಕೆ ನೀಡಿದ್ದಾಗಿ ಬಿದರಿ ತಮ್ಮ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ ಸಮರ್ಥಿಸಿಕೊಂಡರು. ಸಚಿನ್‌ಗೆ ಪ್ರಶಸ್ತಿ ನೀಡಿರುವ ವಿಚಾರವಾಗಿ ರಾಜಕೀಯ ನಡೆಯುತ್ತಿದೆ. ಸಚಿನ್‌ಗೆ ಭಾರತ ರತ್ನ ನೀಡುವ ಮೂಲಕ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ತುಮಕೂರು ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಎಷ್ಟೋ ಬಾರಿ ಮನವಿ ಮಾಡಿದ್ದೇವೆ.ಆದರೆ ಹಾಗೆ ಮಾಡದೇ, ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಸಚಿನ್ ಅವರಿಗೆ ಭಾರತರತ್ನ ನೀಡುವ ಮೂಲಕ ಓಟ್ ಬ್ಯಾಂಕ್ ರಾಜಕೀಯ ಮಾಡುತ್ತಿದೆ ಎಂದು ಬಿದರಿ ಟೀಕಿಸಿದರು.


ಇದರಲ್ಲಿ ಇನ್ನಷ್ಟು ಓದಿ :