Widgets Magazine

ಸುರೇಶ್ ಅಂಗಡಿ, ಹೆಬ್ಬಾಲ್‌ಕರ್- ವಿಜಯಮಾಲೆ ಯಾರ ಕೊರಳಿಗೆ?

ವೆಬ್‌ದುನಿಯಾ| Last Modified ಮಂಗಳವಾರ, 8 ಏಪ್ರಿಲ್ 2014 (19:16 IST)
PR
PR
ಬಿಜೆಪಿಯ ಸುರೇಶ್ ಸಿ ಅಂಗಡಿ ಮತ್ತು ಕಾಂಗ್ರೆಸ್‌ನ ಲಕ್ಷ್ಮಿ ಆರ್. ಹೆಬ್ಬಾಲ್‌ಕರ್ ಪ್ರತಿಷ್ಠಿತ ಬೆಳಗಾವಿ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇಬ್ಬರೂ ಲಿಂಗಾಯತ ಮುಖಂಡರಾಗಿದ್ದು, ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿದ್ದಾರೆ. ರೋಚಕ ಫಲಿತಾಂಶ ನೀಡಬಹುದೆಂದು ಭಾವಿಸಲಾದ ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ಹಣಾಹಣಿ ಹೋರಾಟವಿದೆ. ಸುವರ್ಣ ವಿಧಾನ ಸೌಧ ಸ್ಥಾಪನೆಯಿಂದ ಈ ಕ್ಷೇತ್ರವು ಮಹತ್ವ ಪಡೆದಿದೆ. ಎರಡು ಬಾರಿ ಸಂಸತ್ ಸದಸ್ಯರಾಗಿದ್ದ ಅಂಗಡಿ ತಮ್ಮ ಉದ್ಯಮಗಳ ವಿಸ್ತರಣೆಗೆ ಮತ್ತು ವೃತ್ತಿಪರ ಕಾಲೇಜುಗಳ ನಿರ್ಮಾಣಕ್ಕೆ ತಮ್ಮ ಪ್ರಭಾವ ಬಳಸಿಕೊಂಡರೆಂಬ ದೂರು ಕೇಳಿಬಂದಿದೆ.


ಇದರಲ್ಲಿ ಇನ್ನಷ್ಟು ಓದಿ :