ಬೆಂಗಳೂರು : ನನ್ನ ಗಂಡ ಸತ್ತು ಹೋಗಿದ್ದಾನೆ. ನನಗೆ ಯಾರೂ ಇಲ್ಲ. ನಾನು ಅಬಲೆ. ನನ್ನ ಆದಾಯ 18 ಸಾವಿರಕ್ಕಿಂತಲೂ ಕಡಿಮೆ ಇದೆ. ದಯವಿಟ್ಟು ನನಗೆ ಒಂದು ಸರ್ಕಾರಿ ನಿವೇಶನವನ್ನು ನೀಡಿ ಎಂದು ಸುಗಂಧಮ್ಮ ಎಂಬ ಮಹಿಳೆ ಬಿಡಿಎ ಸೈಟಿಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದಳು. ಸರ್ಕಾರ ಕೂಡ ಹಿಂದೂ ಮುಂದು ನೋಡದೇ ಸುಗಂಧಮ್ಮನಿಗೆ ಬಿಡಿಎ ನಿವೇಶನವನ್ನು ಮಂಜೂರು ಮಾಡಿತು. ಆದರೆ ಇದೀಗ ಸತ್ಯ ಬಯಲಾಗಿದೆ. ಆಕೆಯ ಗಂಡ ಸತ್ತಿಲ್ಲ. ಗುಂಡು ಕಲ್ಲಿನಂತೆ ಬದುಕಿದ್ದಾರೆ. ಅದೂ ಸುಗಂಧಮ್ಮನ ಜೊತೆಯಲ್ಲೇ..!