ಹನುಮ ಯಾವಾಗ ಹುಟ್ಟಿದ್ದು ಗೊತ್ತಾ? ಎಂದ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಸಿಟಿ ರವಿ

ಬೆಂಗಳೂರು| pavithra| Last Modified ಸೋಮವಾರ, 28 ಡಿಸೆಂಬರ್ 2020 (11:13 IST)
ಬೆಂಗಳೂರು : ಹನುಮ ಯಾವಾಗ ಹುಟ್ಟಿದ್ದು ಗೊತ್ತಾ? ಎಂದು ಪ್ರಶ್ನೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೇಳಿಕೆಗೆ ಸಿಟಿ ರವಿ ಟಾಂಗ್ ನೀಡಿದ್ದಾರೆ.

ಕೆಲವರಿಗೆ ಎಲ್ಲವನ್ನೂ ಅನುಮಾನಿಸುವ ಪ್ರವೃತ್ತಿ ಇರುತ್ತದೆ. ಸಿದ್ದರಾಮಯ್ಯಗೂ ಅಂಥ ಕಾಯಿಲೆ ಇರಬೇಕು.  ನಂಬಿಕೆ ಎಲ್ಲವನ್ನೂ ಮೀರಿದ್ದು, ನಂಬಿಕೆ ಮೇಲೆ ಜಗತ್ತಿದೆ. ಕೆಲವರಿಗೆ ದೇವರು ಕಾಣಲ್ಲ, ಕೆಲವರಿಗೆ ಎಲ್ಲ ಕಡೆ ಕಾಣ್ತಾನೆ. ನೋಡೋ ದೃಷ್ಟಿ ಇದ್ರೆ ದೇವರನ್ನು ತೋರಿಸಬಹುದು. ಅವರ ತಂದೆ ತಾಯಿಗೆ ದೇವರ ಮೇಲೆ ನಂಬಿಕೆ ಇತ್ತು. ಹೀಗಾಗಿ ಸಿದ್ದರಾಮಯ್ಯ ಎಂದು ದೇವರ ಹೆಸರನ್ನಿಟ್ಟಿದ್ದಾರೆ. ಆದ್ರೆ ಅವರು ಸಹವಾಸ ದೋಷದಿಂದ ಕೆಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :