Widgets Magazine

ಹಾವು ಕಚ್ಚಿ ಇಬ್ಬರು ಮಕ್ಕಳ ದಾರುಣ ಸಾವು

ಬಿಜಾಪುರ| ವೆಬ್‌ದುನಿಯಾ| Last Modified ಶುಕ್ರವಾರ, 28 ಫೆಬ್ರವರಿ 2014 (11:57 IST)
PR
PR
ದೋಣಿ(12) ಅಕ್ಷತಾ ಗುರುಶಾಂತ ದೋಣಿ ಎಂಬ ಇಬ್ಬರು ಮಕ್ಕಳು ಹಾವು ಕಡಿದು ಸತ್ತಿರುವ ದುರಂತ ಘಟನೆ ಬಿಜಾಪುರದಲ್ಲಿ ಸಂಭವಿಸಿದೆ. ರಾತ್ರಿ ವೇಳೆಯಲ್ಲಿ ಮಕ್ಕಳು ಮನೆಯಲ್ಲಿ ಮಲಗಿದ್ದಾಗ ಹಾವು ಮನೆಯೊಳಗೆ ಪ್ರವೇಶಿಸಿ ಕಚ್ಚಿದ್ದರಿಂದ ಇವರಿಬ್ಬರ ಮೈಯಲ್ಲಿ ವಿಷವೇರಿ ಸತ್ತಿದ್ದಾರೆಂದು ತಿಳಿದುಬಂದಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿ ಹಾವು ಕಚ್ಚಿ ಸಾಯುವವರ ಅಧಿಕೃತ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂದು 8 ವಿದೇಶಿ ಸಂಸ್ಥೆಗಳು ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ. 2005ರಲ್ಲಿ ಹಾವು ಕಚ್ಚಿ 2400 ಸಾವುಗಳು ಕರ್ನಾಟಕದಲ್ಲಿ ಸಂಭವಿಸಿತ್ತು. ಆದರೆ ಅಧಿಕೃತ ಸಂಖ್ಯೆಯಲ್ಲಿ 183 ಸಾವುಗಳನ್ನು ತೋರಿಸಿತ್ತು.


ಇದರಲ್ಲಿ ಇನ್ನಷ್ಟು ಓದಿ :