ಬೆಂಗಳೂರು: ಅಗ್ಗದ ದರದಲ್ಲಿ ಊಟ ಒದಗಿಸುವ ಉದ್ದೇಶದಿಂದ ನಗರದಲ್ಲಿ ಆರಂಭಿಸಲಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆ ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ. ಆದರೆ ಈ ಯೋಜನೆ ಯಶಸ್ವಿಯಾಗುತ್ತಿರುವುದು ಬಿಜೆಪಿಯವರಿಗೆ ಸಹಿಸಲಾಗುತ್ತಿಲ್ಲ. ಹಾಗಾಗಿ ಕ್ಯಾಂಟೀನ್ ಅಡುಗೆಗೆ ಜಿರಲೆಯೋ ಮತ್ತೇನಾದರೂ ಹಾಕುವ ಭಯವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ನಮ್ಮ ಯೋಜನೆ ಯಶಸ್ವಿಯಾಗದಂತೆ ಮಾಡಲು ಬಿಜೆಪಿಯವರು ಏನು ಬೇಕಾದರೂ ಮಾಡಿಯಾರು. ಜಿರಲೆಯಂತಹದ್ದನ್ನು ಏನಾದರೂ ಹಾಕಿ ಊಟ ಕೆಡಿಸಲೂ ಹಿಂಜರಿಯರು ಎಂದು ದಿನೇಶ್