ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಒಂದು.ಮೋದಿ ಬರ್ತಾರೆ ಅನ್ನುವ ಒಂದೇ ಕಾರಣಕ್ಕೆ 21 ಕೋಟಿ ಖರ್ಚು ಮಾಡಿ ವಿಶ್ವವಿದ್ಯಾಲಯ ಸುತ್ತ ಮುತ್ತ ಡಾಂಬರೀಕರಣ ರಾತ್ರೋರಾತ್ರಿ ಮಾಡಿದ್ರು, ಅಷ್ಟೇ ಅಲ್ಲ ಮೋದಿ ಹೋಗಲು ರಸ್ತೆ ಸಲಿಸಾಗಲಿ ಎಂದು ಇರುವ ಹಂಪ್ಸ್ ನೆಲ್ಲ ತೆಗೆದು ವಿದ್ಯಾರ್ಥಿಗಳ ಜೀವಕ್ಕೆ ಸಂಕಷ್ಟ ತಂದಿಟ್ಟಿದ್ದಾರೆ.ರಾಜಧಾನಿಗೆ ಮೋದಿ ಬರ್ತಾರೆಂದು ಕೇವಲ 4 ಗಂಟೆಗೆ ಸುಮಾರು 21 ಕೋಟಿ ಖರ್ಚು ಮಾಡಿ ರಸ್ತೆಯನ್ನೆಲ್ಲ ಲಕಲಕ ಅಂತಾ ಹೊಳೆಯುವಂತೆ ಮಾಡಿದ್ದಾರೆ. ಆದ್ರೆ ಮೋದಿಯ ಪ್ರತಿಷ್ಟೆಗೆ ಇಷ್ಟೇಲ್ಲ ಖರ್ಚು ಮಾಡಿದವರಿಗೆ ವಿದ್ಯಾರ್ಥಿಗಳ ಜೀವದ ಬಗ್ಗೆ ಕಾಳಜಿ ಇಲ್ಲದಂತಾಗಿದೆ.ವಿಶ್ವವಿದ್ಯಾಲಯದಲ್ಲಿದ್ದ 22 ಹಂಸ್ ನ್ನ ರಾತ್ರೋರಾತ್ರಿ ತೆಗೆದು ಪ್ರಧಾನಿಗಳು ಹೋಗಲಿ ಎಂದು ಬಿಬಿಎಂಪಿ ಅನುಕೂಲ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಹೋಗಲಿ ಎಂದು 0 ಟ್ರಾಫಿಕ್ ಮಾಡಿದ್ದಾರೆ.ಅಷ್ಟೇ ಅಲ್ಲ ಮೋದಿ ಲ್ಯಾಂಡ್ ಆಗ್ತಾರೆಂದು ಇದ್ದಾಂತಹ 3 ಎಲೆಪ್ಯಾಡ್ ಗಳನ್ನ ಟಾರ್ ಹಾಕಿ ಬೆಂಗಳೂರು ಅಂದ್ರೆ ವಾರ್ ವ್ಹಾ ಅನ್ನುವಾಗೆ ಮಾಡಿದ್ದಾರೆ .