ಬೆಂಗಳೂರಿನಲ್ಲಿ ಕ್ಲಬ್ ಮೇಲೆ ದಾಳಿ: 7 ಲಕ್ಷ ರೂ. ದೋಚಿದ ದರೋಡೆಕೋರರು

ವೆಬ್‌ದುನಿಯಾ| Last Modified ಬುಧವಾರ, 2 ಏಪ್ರಿಲ್ 2014 (11:35 IST)
PR
PR
ಬೆಂಗಳೂರು: ಕುಂಬಳಗೋಡಿನಲ್ಲಿರುವ ಸ್ಯಾಟಲೈಟ್ ಕ್ಲಬ್ ಮೇಲೆ ನಿನ್ನೆ ರಾತ್ರಿ 11.30ಕ್ಕೆ ದರೋಡೆಕೋರರು ದಾಳಿ ನಡೆಸಿ 7 ಲಕ್ಷ ರೂ. ನಗದು, 250 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. 10-12 ಜನ ಮುಸುಕುಧಾರಿಗಳು ಕೈಯಲ್ಲಿ ಮಚ್ಚು ಮತ್ತು ಲಾಂಗ್‌ಗಳನ್ನು ಹಿಡಿದು ಬಂದಿದ್ದು, ತಮ್ಮ ಕೈಯಲ್ಲಿದ್ದ ಮಾರಕಾಸ್ತ್ರಗಳಿಂದ ಬೆದರಿಸಿ ಹಣ ದೋಚಿದ್ದಾರೆ. ಕ್ಯಾಶಿಯರ್ ಪ್ರಭಾಕರ್ ಎಂಬವರಿಗೆ ಮಚ್ಚು ತೋರಿಸಿ ಬೆದರಿಸಿ ಎಲ್ಲ ಹಣವನ್ನು ಕೊಡುವಂತೆ ಬೆದರಿಕೆ ಹಾಕಿದರು. ಕ್ಲಬ್‌ನಲ್ಲಿದ್ದ ವಸ್ತುಗಳನ್ನು ಮತ್ತು ಗಾಜನ್ನು ಪುಡಿ ಪುಡಿ ಮಾಡಿದ್ದು, ದರೋಡೆಕೋರರು ಪರಾರಿಯಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :