ಮಾಂಸಾಹಾರಿಗಳ ಓಟು ನಮಗೆ ಬೇಡ ಅಂತ ಬಿಜೆಪಿ ಅವರು ತಾಕತ್ತಿದ್ದರೆ ಹೇಳಲಿ ಎಂದು ಕಮಲ ನಾಯಕರಿಗೆ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲೊಡ್ಡಿದ್ದಾರೆ.ಕೊಡಗಿನ ಕೊಡ್ಲಿಪೇಟೆ ಬಸವೇಶ್ವರ ದೇವಸ್ಥಾನಕ್ಕೆ ಸಿದ್ದರಾಮಯ್ಯ ಅವರು ಭೇಟಿ ನೀಡುವ ಮುನ್ನ ಕೋಳಿ ಸಾರಿನ ಊಟ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ಆರೋಪ ಮಾಡಿದ್ದಾರೆ. ಸದ್ಯ ಈ ಬಗ್ಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.