1 ತಿಂಗಳ ಕೂಸಿನ ಮೇಲೆ ಹಲ್ಲೆ ನಡೆಸಿದ ಕಿರಾತಕಿ

ಬೆಂಗಳೂರು| Jaya| Last Updated: ಭಾನುವಾರ, 11 ಸೆಪ್ಟಂಬರ್ 2016 (17:55 IST)
ಮಾನವೀಯತೆಯನ್ನು ಮರೆತು 1 ತಿಂಗಳ ನವಜಾತ ಶಿಶುವಿನ ಮೇಲೆ ಮನೆ ಮಾಲಿಕೆಯೋರ್ವಳು ಹಲ್ಲೆ ನಡೆಸಿದ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. 
ಆರೋಪಿಯನ್ನು ಸರಸ್ವತಿ ಎಂದು ಗುರುತಿಸಲಾಗಿದ್ದು, ಹಣದ ವಿಷಯಕ್ಕೆ ಆಕೆ ತನ್ನ ಮನೆಯಲ್ಲಿ ಬಾಡಿಗೆಗಿದ್ದ ಶೋಭಾ ಮತ್ತು ಆಕೆಯ ಪತಿಯ ಜತೆ ನಿನ್ನೆ ಜಗಳವಾಡಿದ್ದಾಳೆ. 
 
ಇಂದು ಶೋಭಾ ಮಗುವಿಗೆ ಹಾಲುಣಿಸುತ್ತಿದ್ದಾಗ ಅಲ್ಲಿಗೆ ಬಂದ ಸರಸ್ವತಿ ಮತ್ತೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಪ್ರಾರಂಭಿಸಿದ್ದಾಳೆ. ಮಗು ಹಾಲು ಕುಡಿಯುತ್ತಿದೆ. ಆಮೇಲೆ ಮಾತನಾಡೋಣ ಎಂದು ಹೇಳಿದರೂ ಕೇಳದೇ ತಾಯಿ ಮತ್ತು 1 ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ್ದಾಳೆ. ಮಗುವಿನ ಕೆನ್ನೆ ಮತ್ತು ಕಿವಿಯ ಭಾಗಕ್ಕೆ ಆಕೆ ಹೊಡೆದಿದ್ದಾಳೆ ಎಂದು ಹೇಳಲಾಗುತ್ತಿದೆ. 
 
ಸದ್ಯ ಮಗುವನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಕೆನ್ನೆ ಮತ್ತು ಮೆದುಳಿಗೆ ಒಳ ಪೆಟ್ಟು ಬಿದ್ದಿರಬಹುದೆಂದು ವೈದ್ಯರು ಹೇಳುತ್ತಿದ್ದು ಸ್ಕ್ಯಾನಿಂಗ್ ಬಳಿಕವಷ್ಟೇ ಗಾಯದ ಗಂಭೀರತೆ ತಿಳಿದು ಬರಲಿದೆ. 
 
ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಪುಟ್ಟ ಮಗುವಿನ ಮೇಲೆ ರಾಕ್ಷಸಿ ಕೃತ್ಯ ನಡೆಸಿದ ಮಹಿಳೆಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :