Widgets Magazine

16 ವರ್ಷದ ಬಾಲಕಿಯ ಮೇಲೆ 10 ಮಂದಿ ಕಾಮುಕರಿಂದ ಅತ್ಯಾಚಾರ

ಮುಂಬೈ| pavithra| Last Modified ಗುರುವಾರ, 13 ಫೆಬ್ರವರಿ 2020 (09:04 IST)
ಮುಂಬೈ : 16 ವರ್ಷದ ಬಾಲಕಿಯನ್ನು ಬಲವಂತವಾಗಿ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ  ಆಕೆಯ  ಮೇಲೆ 10 ಮಂದಿ ಕಾಮುಕರು 6 ತಿಂಗಳ ಕಾಲ ಎಸಗಿದ ಘಟನೆ ಮಹಾರಾಷ್ಟ್ರದ ಸೋಲಾಪುರದಲ್ಲಿ ನಡೆದಿದೆ.


ಬಾಲಕಿಗೆ ತಂದೆ ಇರದ ಕಾರಣ ತಾಯಿ ಕೂಲಿ ಕೆಲಸ ಮಾಡಿ ಸಾಕುತ್ತಿದ್ದಳು. ಆದರೆ ಆಕೆಯ ಸ್ನೇಹಿತರು ಆಕೆಯನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ  ತಮ್ಮ ಜೊತೆ ಮತ್ತಷ್ಟು ಮಂದಿಯನ್ನು ಸೇರಿಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ದೇವಾಲಯದ ಹೊರಗಡೆ ಅಳುತ್ತಿದ್ದ ಬಾಲಕಿಯನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಾಲಕಿಯನ್ನು ವಿಚಾರಿಸಿದಾಗ ಆಕೆ ನಡೆದ ವಿಚಾರವನ್ನು ಬಾಯ್ಬಿಟ್ಟಿದ್ದಾಳೆ.


ಈ ಘಟನೆಯ ಬಗ್ಗೆ ದಾಖಲಿಸಿಕೊಂಡ ಸೋಲಾಪುರದ ಪೊಲೀರು ಐವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :