10 ವರ್ಷದ ವಿದ್ಯಾರ್ಥಿನಿಯೋರ್ವಳು ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ನೌಬಾದ್ನಲ್ಲಿ ನಡೆದಿದೆ. ನಿಶಾ ಪವಾರ್ ಎಂಬಾಕೆ ಮೃತ ದುರ್ದೈವಿಯಾಗಿದ್ದಾಳೆ. ಬಾಲಕಿಯ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳಿದ್ದಾರೆ. ಅಜ್ಜ- ಅಜ್ಜಿ ಜತೆ ವಾಸವಾಗಿದ್ದ ಬಾಲಕಿ ಖಾಸಗಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು. ಬುಧವಾರ ಮುಂಜಾನೆ ಶಾಲೆಗೆ ಹೋಗಲು ಸಮವಸ್ತ್ರ ಧರಿಸಿಕೊಂಡ ಬಾಲಕಿ ಏಕಾಏಕಿ ಕೋಣೆಗೆ ತೆರಳಿ ಶಾಲಿನಿಂದ ನೇಣು ಬಿಗಿದುಕೊಂಡು ಮೃತ ಪಟ್ಟಿದ್ದಾಳೆ.