2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಕ್ಕಿಳಿಸುವ ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಕಾಂಗ್ರೆಸ್ ಮುನ್ನಡೆಸಲಿದೆ ಎಂದು ನಾಗಾಲ್ಯಾಂಡ್ನಲ್ಲಿ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಗುರಿಯನ್ನು ಸಾಕಾರಗೊಳಿಸಲು 137 ವರ್ಷಗಳಷ್ಟು ಹಳೆಯದಾದ ಪಕ್ಷವು ಬೇರೆ ಪ್ರತಿಯೊಂದು ಪಕ್ಷದ ಜತೆಗೂ ಮಾತುಕತೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ. ಈ ದೇಶವನ್ನು ಎದುರಿಸಬಲ್ಲ ವ್ಯಕ್ತಿ ನಾನೊಬ್ಬನೇ. ನನ್ನನ್ನು ಬೇರೆ ಯಾರೂ ಮುಟ್ಟಲಾರರು ಎಂದು ಪ್ರಧಾನಿ ನರೇಂದ್ರ ಮೋದಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಪ್ರಜಾಪ್ರಭುತ್ವವಾದಿಯಾದ