ಬೆಂಗಳೂರು : ಕಾಂಗ್ರೆಸ್ಗೆ ವಾಪಸ್ ಹೋಗೋ ಬಗೆಗಿನ ವದಂತಿ ಬಗ್ಗೆ ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ. ನಾನು ಕಾಂಗ್ರೆಸ್ಗೆ ಹೋಗಲ್ಲ, 100% ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರಲ್ಲ ಅಂತಾ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿ, ಕೆಲವರು ಶಾಸಕರಾಗಬೇಕು ಅಂತ ಕನಸು ಕಾಣ್ತಿದ್ದಾರೆ, ಸುಮ್ಮನೆ ವದಂತಿ ಹಬ್ಬಿಸ್ತಿದ್ದಾರೆ. ಸಿಎಂ, ಡಿಸಿಎಂ ನಮ್ಮ ಕ್ಷೇತ್ರಕ್ಕೆ ಬಂದಾಗ ಮಾಡಿರುವ ಕೆಲಸದ ಬಗ್ಗೆ ಒಳ್ಳೆ ಮಾತನಾಡಬಾರದು ಅಂದ್ರೆ ಹೇಗೆ?