ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್`ಗಳಿಗೆ ನಾಳೆ ಚಾಲನೆ ಸಿಗಲಿದೆ. 101 ಇಂದಿರಾ ಕ್ಯಾಂಟೀನ್`ಗಳಿಗೆ ನಾಳೆ ಚಾಲನೆ ಸಿಗಲಿದ್ದು, ಇನ್ನುಳಿದ ಕ್ಯಾಂಟೀನ್`ಗಳು ಅಕ್ಟೋಬರ್2ರ ಹೊತ್ತಿಗೆ ಲೋಕಾರ್ಪಣೆಗೊಳ್ಳಲಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಅಡುಗೆ ಮನೆಗಳನ್ನ ನಿರ್ಮಿಸಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.ಕೇವಲ 2 ತಿಂಗಳುಗಳಲ್ಲಿ 101 ಕ್ಯಾಂಟೀನ್`ಗಳನ್ನ ನಿರ್ಮಾಣ ಮಾಡಿರುವುದು ಬಿಬಿಎಂಪಿ ಇತಿಹಾಸದಲ್ಲಿ ಇದೇ ಮೊದಲು ಎಂದು ಸಚಿವರು ಹೇಳಿದ್ದಾರೆ. ಪ್ರತಿ