ಸಿಗರೇಟು ಸೇದಲು ಬಂದವರು 15 ಗುಡಿಸಲುಗಳಿಗೆ ಬೆಂಕಿ ಇಟ್ಟಿದ್ದು, ಅದರಲ್ಲಿ 11 ಗುಡಿಸಲುಗಳು ಸುಟ್ಟು ಭಸ್ಮವಾಗಿ ಬಡಜನರ ಬದುಕು ಬೀದಿಗೆ ಬಿದ್ದ ಘಟನೆ ನಡೆದಿದೆ.ಹಾಸನ ಜಿಲ್ಲೆಯ ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಬೆಟ್ಟದ ರಸ್ತೆಯಲ್ಲಿ ಗುಡಿಸಲುಗಳಿಗೆ ಹತ್ತಿಕೊಂಡ ಬೆಂಕಿಯು ಬಡಜನರ ಬದುಕನ್ನು ಕಿತ್ತುಕೊಂಡಿದೆ. 15 ಗುಡಿಸಲುಗಳಲ್ಲಿ, 11 ಗುಡಿಸಲುಗಳು ಬೆಂಕಿಯಿಂದಾಗಿ ಸಂಪೂರ್ಣ ಭಸ್ಮವಾಗಿವೆ.ಸ್ವಂತ ಜಾಗ ಮನೆ ಇಲ್ಲದೆ, ಗುಡಿಸಲು ಕಟ್ಡಿಕೊಂಡು ವಾಸವಿದ್ದ ಬಡವರು ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ.