ಒಂದು ಡಜನ್ ಪೊಲೀಸರು ಮಾಡಬಾರದ ಕೆಲಸ ಮಾಡಿ ಸಸ್ಪೆಂಡ್ ಆಗಿದ್ದಾರೆ. ಕರ್ತವ್ಯಲೋಪ, ತನಿಖೆಯಲ್ಲಿ ನಿಷ್ಕಾಳಜಿ, ಅಕ್ರಮ ಚಟುವಟಿಕೆ ಮತ್ತು ವ್ಯಾಜ್ಯಗಳಲ್ಲಿ ಭಾಗಿ ಸೇರಿದಂತೆ ಹಲವು ವಿಚಾರಗಳಲ್ಲಿ ಭಾಗಿಯಾಗಿದ್ದ ಆರೋಪದಡಿ 12 ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಹುಬ್ಬಳ್ಳಿ – ಧಾರವಾಡ ಕಮಿಷ್ನರೇಟ್ ಘಟಕ ವ್ಯಾಪ್ತಿಯ 12 ಜನ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ ಅಂತ ಪೊಲೀಸ್ ಆಯುಕ್ತ ಆರ್. ದಿಲೀಪ್ ತಿಳಿಸಿದ್ದಾರೆ.ಈ ವರ್ತನೆ ತೋರಿದ ಸಿಬ್ಬಂದಿ ವಿರುದ್ಧ ಡಿಸಿಪಿ ಮತ್ತು ಎಸಿಪಿಗಳು