ಉದ್ಯಾನ ನಗರಿ ಬೆಂಗಳೂರು ಮಂಗಳವಾರ 127 ವರ್ಷಗಳಲ್ಲೇ ದಾಖಲೆಯ ಮಳೆಗೆ ಸಾಕ್ಷಿಯಾಗಿದೆ. ಕೇವಲ 3 ಗಂಟೆಯಲ್ಲಿ 180 ಮಿ.ಮೀ ಮಳೆ ಸುರಿದಿದ್ದು, 1890ರ ನಂತರ ಆಗಸ್ಟ್ ತಿಂಗಳಲ್ಲಿ ಸುರಿದ ಭಾರೀ ಪ್ರಮಾಣದ ಮಳೆ ಇದು ಎನ್ನಲಾಗಿದೆ. ಮಂಗಳವಾರ ಬೆಳಗಿನ ಜಾವ 3ರಿಂದ 6ಗಂಟೆ ಒಳಗಿನ ಸಮಯದಲ್ಲಿ 180 ಮಿ.ಮೀ ಮಳೆಗೆ ಸುರಿದಿದೆ. ನೀರಿನಲ್ಲಿ ಮುಳುಗಿದ ತಗ್ಗು ಪ್ರದೇಶಗಳು, ರಸ್ತೆಗಳು ಜಲಾವೃತ, ಧರೆಗುರುಳಿದ ಮರಗಳು, ಟ್ರಾಫಿಕ್ ಜಾಂ, ಬಸ್ ನಿಲ್ದಾಣದಲ್ಲೇ ನಿಂತ