ಬೆಂಗಳೂರು-129 ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಶಾಕ್ ಎದುರಾಗಿದೆ.ನಗರದಲ್ಲಿ 129 ಖಾಸಗಿ ಶಾಲೆಗಳು ನೋಂದಾಣಿಯಾಗಿಲ್ಲ ಹೀಗಾಗಿ SSLC ಪ್ರವೇಶ ಪತ್ರವನ್ನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆಹಿಡಿದಿದೆ.2023-24 ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಮಾಡಿಕೊಳ್ಳದ 129 ಖಾಸಗಿ ಪ್ರೌಢಶಾಲೆಗಳಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಢವ ಢವ ಶುರುವಾಗಿದೆ. ಶಾಲೆಗಗಳಿಗೆ ಅನಧಿಕೃತ ಎಂದು ಮಂಡಳಿ ಸ್ಪಷ್ಟನೆ ನೀಡಿದ್ದು, 15 ದಿನಗಳ ಕಾಲ ಶಾಲೆಗಳಿಗೆ ಡೆಡ್ ಲೈನ್ ಕೊಟ್ಟಿದೆ.