ಕೊರೋನಾ ವೈರಸ್ ತಡೆಗಟ್ಟುವ ಮತ್ತು ಜನಸಂದಣಿ ನಿಯಂತ್ರಣದಲ್ಲಿಡಲು ಈ ಜಿಲ್ಲೆಯಲ್ಲಿ ನಿಷೇಧಾಜ್ಞೆ ಅವಧಿ ವಿಸ್ತರಣೆ ಮಾಡಲಾಗಿದೆ. ಈಗಾಗಲೇ ಕಲಬುರಗಿ ನಗರದಾದ್ಯಂತ ಜಾರಿಯಲ್ಲಿರುವ ಸಿ.ಆರ್.ಪಿ.ಸಿ. ಕಾಯ್ದೆ-1973ರ ಕಲಂ 144 ರನ್ವಯ ನಿಷೇಧಾಜ್ಞೆಯನ್ನು ಮೇ 31ರ ರಾತ್ರಿ 8 ಗಂಟೆಯವರೆಗೆ ರವರೆಗೆ ವಿಸ್ತರಿಸಿ ಕಲಬುರಗಿ ನಗರ ಪೊಲೀಸ್ ಆಯಕ್ತರಾದ ಎನ್. ಸತೀಶಕುಮಾರ ಆದೇಶ ಹೊರಡಿಸಿದ್ದಾರೆ.ಪ್ರಸ್ತುತ ಜಾರಿಯಲ್ಲಿರುವ ಕಲಂ 144 ನಿಷೇಧಾಜ್ಞೆಯನ್ನು ಪ್ರತಿದಿನ ರಾತ್ರಿ 7 ರಿಂದ ಬೆಳಗಿನ 7 ಗಂಟೆಯವರೆಗೆ ಹಾಗೂ ಭಾನುವಾರದಂದು