ಮುಂಬೈ : ಇತ್ತೀಚೆಗೆ 2 ಬಾಳೆಹಣ್ಣಿಗೆ ಅತಿ ಹೆಚ್ಚಿನ ಶುಲ್ಕ ವಿಧಿಸಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು, ಇದೀಗ 2 ಮೊಟ್ಟೆಗೆ ಅತಿ ಹೆಚ್ಚಿನ ಶುಲ್ಕ ವಿಧಿಸಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ನಟ ರಾಹುಲ್ ಬೋಸ್ ಗೆ 2 ಬಾಳೆಗಹಣ್ಣಿಗೆ ಹೊಟೇಲ್ ಮ್ಯಾರಿಯೆಟ್ 442ರೂ. ಬಿಲ್ ನೀಡಿ ಶಾಕ್ ನೀಡಿತ್ತು. ಇದರ ವಿಡಿಯೋವನ್ನು ರಾಹುಲ್ ಟ್ವಟರ್ ನಲ್ಲಿ ಶೇರ್ ಮಾಡಿದ್ದರು. ಇದು ಚರ್ಚೆಗೆ ಒಳಗಾಗಿತ್ತು.