ಆಂಧ್ರಪ್ರದೇಶದಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಎಲೂರು ಜಿಲ್ಲೆಯಲ್ಲಿ ಶನಿವಾರ 18 ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದು ಹಾಕಲಾಗಿದೆ. ಚೇಬ್ರೋಲೆ ಗ್ರಾಮದ ಮುಖಂಡರ ಆದೇಶದ ಮೇರೆಗೆ 18 ನಾಯಿಗಳಿಗೆ ವಿಷದ ಇಂಜೆಕ್ಷನ್ ನೀಡಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಚೇಬ್ರೋಲೆ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ನಾಯಿಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥರ ವಿರುದ್ಧ