ಹುಬ್ಬಳ್ಳಿ : ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆ ಸಮಯಪಾಲನೆಯಲ್ಲಿ ಶೇ. 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ. 2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 150.34 ಮಿಲಿಯನ್ಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಮೂಲಕ 2,755.35 ಕೋಟಿ ರೂ. ಆದಾಯ ಗಳಿಸಿದೆ. ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ಹಾಗೂ ಅತ್ಯಧಿಕ ಪ್ರಯಾಣಿಕರ ಆದಾಯವಾಗಿರುತ್ತದೆ. 2022-23ನೇ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ