ರಾಜ್ಯಕ್ಕೆ ಇಬ್ಬರು ಡಿ.ಸಿಎಂ

ಬೆಂಗಳೂರು| geetha| Last Modified ಭಾನುವಾರ, 14 ನವೆಂಬರ್ 2021 (19:10 IST)
ರಾಜ್ಯದಲ್ಲಿ ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲು ಕೇಂದ್ರ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
 
ಕಾಂಗ್ರೆಸ್ ನಡೆಸುತ್ತಿರುವ ಬಿಟ್ ಕಾಯಿನ್ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿರುವ ನಡುವೆಯೇ ಬಿಜೆಪಿ ವರಿಷ್ಠರು ಪ್ರಬಲವಾಗಿ ಪಕ್ಷದ ಪರವಾಗಿ ನಿಲ್ಲಲು ಮತ್ತು ಸಮರ್ಥರನ್ನು ಡಿಸಿಎಂ ಹುದ್ದೆಗೆ ತರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಏಕಾಂಗಿಯಾಗಿ ವಿಪಕ್ಷದ ಟೀಕೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ ಪಕ್ಷದಲ್ಲಿ ಹಾಗೂ ರಾಜ್ಯ ನಾಯಕರಲ್ಲಿ ಭಿನ್ನಾಭಿಪ್ರಾಯಗಳು ಕೂಡ ಹೆಚ್ಚಾಗುತ್ತಿವೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಬಲ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿ ಪಕ್ಷಕ್ಕೆ ಹೊಸ ವರ್ಚಸ್ಸು ನೀಡಿ ಜನ ಮನ ಗೆಲ್ಲಲು ತಂತ್ರಗಾರಿಕೆಯನ್ನು ಹೆಣೆಯಲಾಗಿದೆ ಎನ್ನಲಾಗುತ್ತಿದೆ. ಇದರ ನಡುವೆ ಸಂಪುಟ ವಿಸ್ತರಣೆ ಕೂಡ ನಡೆದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.


ಇದರಲ್ಲಿ ಇನ್ನಷ್ಟು ಓದಿ :