ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರಿಗೆ ವಿಧಾನಸಭೆ ಸಚಿವಾಲಯದಿಂದ ಶಾಸಕ ಸ್ಥಾನಕ್ಕೆ ನೀಡುತ್ತಿದ್ದ ವೇತನಕ್ಕೆ ಕತ್ತರಿ ಬಿದ್ದಿದೆ. ಈ ಕುರಿತು ಸ್ಪೀಕರ್ ಕೆ.ಬಿ.ಕೋಳಿವಾಡ ಆದೇಶದ ಮೇರೆಗೆ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷರಾಗಿ ಇರುವ ಶಾಸಕರು ನಿಗಮದಿಂದಲೇ ವೇತನ ಪಡೆಯಬೇಕು. ವಿವಿಧ ಸಮಿತಿಗಳ ಸದಸ್ಯರಾಗಿ ಭತ್ಯೆ ಪಡೆಯಬಹುದು. ಶಾಸಕರಿಗೆ ವೇತನ, ಭತ್ಯೆ, ಪೆಟ್ರೋಲ್, ಮನೆ ಬಾಡಿಗೆ ನೀಡುತ್ತಾರೆ. ಶಾಸಕರು ನಿಗಮ ಮಂಡಳಿ ಅಧ್ಯಕ್ಷರಾಗಿ ಸಚಿವ ಸಂಪುಟ ದರ್ಜೆ