ಸಿಎಂಗೆ 224 ಕ್ಷೇತ್ರಗಳು ಒಂದೇ, ತಾರತಮ್ಯ ಮಾಡಿಲ್ಲ-ಸಚಿವ ಎಸ್ ಟಿ.ಸೋಮಶೇಖರ್

ಬೆಂಗಳೂರು| pavithra| Last Updated: ಸೋಮವಾರ, 5 ಏಪ್ರಿಲ್ 2021 (12:19 IST)
ಬೆಂಗಳೂರು : ಮುಖ್ಯಮಂತ್ರಿಗಳಿಗೆ 224 ಕ್ಷೇತ್ರಗಳು ಒಂದೇ.  ಕಾಂಗ್ರೆಸ್, ಜೆಡಿಎಸ್ , ಬಿಜೆಪಿ ಶಾಸಕರ ಕ್ಷೇತ್ರ ಎಂಬುದು ಇಲ್ಲ. ಮುಖ್ಯಮಂತ್ರಿ ತಾರತಮ್ಯ ಮಾಡಿಲ್ಲ  ಎಂದು ಸಚಿವ ಎಸ್ ಟಿ.ಸೋಮಶೇಖರ್ ಹೇಳಿದ್ದಾರೆ.

ಎಲ್ಲರೂ ಒಂದೇ ಎಂದು ಎಲ್ಲರಿಗೂ ಅನುದಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ತಾರತಮ್ಯವನ್ನು ಮಾಡಿಲ್ಲ. ನನ್ನ ಸಹಕಾರ ಇಲಾಖೆಗೆ ಯಾರು ಹಸ್ತಕ್ಷೇಪ ಮಾಡಿಲ್ಲ. ಮೈಸೂರು ಉಸ್ತುವಾರಿ ವಿಚಾರವಾಗಿ ಯಾರು ಹಸ್ತಕ್ಷೇಪ ಮಾಡಿಲ್ಲ ಎಂದು ಎಸ್ ಟಿ.ಸೋಮಶೇಖರ್ ಹೇಳಿದ್ದಾರೆ.

ಬೇರೆಯವರು ಸಿಎಂ ಆಗಿದ್ದಾಗ ಯಾರು ಹಸ್ತಕ್ಷೇಪ ಮಾಡಿದ್ರು ಗೊತ್ತು. ವಿರೋಧ ಪಕ್ಷದಿಂದ ಮಾತ್ರ ಹಸ್ತಕ್ಷೇಪವಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

 


ಇದರಲ್ಲಿ ಇನ್ನಷ್ಟು ಓದಿ :