ಬೆಲೆಗಳು ದಿನದಿಂದ ದಿನಕ್ಕೆ ಏರಿಕೆ ಆಗ್ತಿದೆ. ಆದರೆ ಬೆಂಗಳೂರಿನ ಮನೆ ಮಾಲೀಕನೋರ್ವನಿಗೆ ವಿದ್ಯುತ್ ಶಾಕ್ ಎದುರಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ದೊಡ್ಡ ಕಮ್ಮನಹಳ್ಳಿಯಲ್ಲಿರುವ ಮನೆ ಮಾಲೀಕನಿಗೆ ಬೆಸ್ಕಾಂ ಶಾಕ್ ನೀಡಿದೆ. ತಿಂಗಳಿಗೆ 300-400 ರೂಪಾಯಿ ಬರ್ತಿದ್ದ ಕರೆಂಟ್ ಬಿಲ್, ಸೆಪ್ಟೆಂಬರ್ನಲ್ಲಿ ಬರೋಬ್ಬರಿ 22 ಸಾವಿರ ರೂಪಾಯಿ ಬಂದಿದೆ. ವಿದ್ಯುತ್ ಬಿಲ್ ಕಂಡ ಮನೆ ಮಾಲೀಕ ರಾಜುವಿಗೆ ವಿದ್ಯುತ್ ಶಾಕ್ ಹೊಡೆದಂತಾಗಿದೆ. ಆಗಸ್ಟ್ ತಿಂಗಳಿನಲ್ಲಿ 348 ರೂಪಾಯಿ ಕರೆಂಟ್ ಬಿಲ್ ಬಂದಿತ್ತು.