ಕರ್ನಾಟಕದಲ್ಲಿ ಒಂದು ವಿಶ್ವ ವಿದ್ಯಾಲಯ ಸೇರಿದಂತೆ ದೇಶದಕಲ್ಲಿ 24 ನಕಲಿ ವಿಶ್ವವಿದ್ಯಾಲಯಗಳಿವೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಬಹಿರಂಗಪಡಿಸಿದೆ. ಲೋಕಸಭೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಸದನಕ್ಕೆ ಲಿಖಿತ ಉತ್ತರ ನೀಡಿದ್ದು, ಯುಜಿಸಿ 24 ಸ್ವಯಂ ಘೋಷಿತ ಶಿಕ್ಷಣ ಸಂಸ್ಥೆಗಳನ್ನು ನಕಲಿ ಎಂದು ಘೋಷಿಸಿದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಇನ್ನೂ ಎರಡು ಸಂಸ್ಥೆಗಳನ್ನು ಪತ್ತೆ ಮಾಡಿದೆ. ವಿದ್ಯಾರ್ಥಿಗಳು, ಪೋಷಕರು, ಸಾಮಾನ್ಯ ಜನರು ಮತ್ತು ವಿದ್ಯುನ್ಮಾನ ಮುದ್ರಣ