ಕಲಬುರಗಿ ಜಿಲ್ಲೆಗೆ 2018-19ನೇ ಸಾಲಿನಲ್ಲಿ ಹೈದ್ರಾಬಾದ ಕರ್ನಾಟಕದ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮೈಕ್ರೋ ಮತ್ತು ಮ್ಯಾಕ್ರೋ ನಿಧಿಯಲ್ಲಿ ಹಂಚಿಕೆ ಮಾಡಲಾದ 247.91 ಕೋಟಿ ರೂ.ಗಳಿಗೆ ಸಿದ್ದಪಡಿಸಲಾದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.ಕಲಬುರಗಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಹೆಚ್.ಕೆ.ಆರ್.ಡಿ.ಬಿ. ಜಿಲ್ಲಾ ಸಲಹಾ ಸಮಿತಿ ಸಭೆ ಅನುಮೋದನೆ ನೀಡಿತು.2018-19ನೇ ಸಾಲಿನಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮೈಕ್ರೋ ನಿಧಿಯಡಿ 7797.88 ಲಕ್ಷ ರೂ. ಹಾಗೂ ಮ್ಯಾಕ್ರೋ ನಿಧಿಯಡಿ