ಡಿಸಿಎಂ ನೇತೃತ್ವದಲ್ಲಿ 25 ಶಾಸಕರು ದೆಹಲಿಗೆ ತಲುಪಿದ್ದು, ಸಿಎಂ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಾರಾ? ಎನ್ನೋ ಪ್ರಶ್ನೆ ಎದ್ದಿದೆ. ರಾಜಸ್ಥಾನದಲ್ಲಿ ಕೊರೊನಾ ನಡುವೆ ಬಿಗ್ ಡ್ರಾಮಾ ಶುರುವಾಗಿದೆ. ಸಿಎಂ ಅಶೋಕ್ ಗೆಹ್ಲೋಟ್ ಕುರ್ಚಿ ಅಲುಗಾಡುತ್ತಿದ್ದು, ಇದಕ್ಕೆ ಡಿಸಿಎಂ ಸಚಿನ್ ಪೈಲಟ್ ಕಾರಣ ಎಂದು ಆರೋಪಿಸಲಾಗುತ್ತಿದೆ. ಡಿಸಿಎಂ ನೇತೃತ್ವದಲ್ಲಿ 25 ಶಾಸಕರು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಗೆಹ್ಲೋಟ್ ಸಿಎಂ ಸ್ಥಾನ ತೂಗುಯ್ಯಾಲೆಯಲ್ಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ನಡುವೆ ಬಿಜೆಪಿಯು ಕಾಂಗ್ರೆಸ್