ನಿನ್ನೆ ಇಡೀ ವಿಶ್ವದಾದ್ಯಂತ ಬಿಡುಗಡೆಯಾದ ‘ಕೆಜಿಎಫ್ 2’ ಸಿನಿಮಾ ಇತಿಹಾಸ ಸೃಷ್ಟಿಸಿದೆ. ಯಶ್ ನಟನೆಯ ಈ ಸಿನಿಮಾ ಮೊದಲ ದಿನವೇ ವಿಶ್ವಾದ್ಯಂತ ರು.250 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿದೆ. ದೇಶದ ನಾನಾ ಭಾಗದ ಬಹುತೇಕ ವಿಮರ್ಶಕರು 4 ಸ್ಟಾರ್ ಕೊಟ್ಟು, ಕನ್ನಡ ಸಿನಿಮಾ ಬಗ್ಗೆ ಮೆಚ್ಚಿ ಕೊಂಡಾಡಿದ್ದಾರೆ. ತೆಲುಗು, ಮಲಯಾಳಂ, ಹಿಂದಿ ಭಾಷೆಯ ಅಭಿಮಾನಿಗಳು ಅಭೂತಪೂರ್ವವಾಗಿ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಅದರಲ್ಲೂ ಬಾಲಿವುಡ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ..ಮೊದಲ ದಿನ ಯಾರೂ