ಬೆಳಗಾವಿ : ವೈಭವ ನಗರದ ಸತ್ಯಸಾಯಿ ಕಾಲೋನಿಯಲ್ಲಿ ಕೇವಲ 250 ರೂ.ಗಾಗಿ ವ್ಯಕ್ತಿಯನ್ನು ಬಿಯರ್ ಬಾಟಲ್ ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರಾಯಿ ತರಲು ಕೊಟ್ಟಿದ್ದ ಹಣದಲ್ಲಿ ಉಳಿದ ಚಿಲ್ಲರೆ ಹಣ ವಾಪಸ್ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಿಯರ್ ಬಾಟಲಿಯಿಂದ ಹೊಡೆದು ಕೊಲೆ ಮಾಡಲಾಗಿದೆ.ವೈಭವ ನಗರದ ಸತ್ಯ ಸಾಯಿ ಕಾಲೋನಿ ನಿವಾಸಿ ಮಹಮ್ಮದ್ ದಿಲಾಪುಕಾರ ಶೇಖ್ (27)