ಒಂದು ಆಟೋದಲ್ಲಿ ಸಾಮಾನ್ಯವಾಗಿ 3 ಮಂದಿ ಪ್ರಯಾಣಿಸಬಹುದಾಗಿದೆ. ಆದ್ರೆ ಇಲ್ಲೊಂದು ಆಟೋದಲ್ಲಿ ಬರೋಬ್ಬರಿ 27 ಮಂದಿ ಪ್ರಯಾಣಿಸಿದ್ದು, ಅದನ್ನು ಕಂಡ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ನಡೆದಿದೆ. ಅತಿವೇಗವಾಗಿ ಚಲಾಯಿಸುತ್ತಿದ್ದ ಆಟೋವನ್ನು ತಡೆಹಿದ ಪೊಲೀಸರಿಗೆ ಆಘಾತ ಕಾದಿತ್ತು. ಆಟೋದಲ್ಲಿದ್ದವರನ್ನು ಕೆಳಗಿಳಿಸದ ಪೊಲೀಸರು ಹಿರಿಯರು ಮತ್ತು ಮಕ್ಕಳು ಸೇರಿದಂತೆ 27 ಮಂದಿಯನ್ನು ಕಂಡು ಶಾಖ್ ಆಗಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುವ ವಿಡಿಯೋ ವೈರಲ್ ಆಗಿದೆ.