ಬೆಂಗಳೂರು,ಆ.20: ರಾಜ್ಯದಲ್ಲಿ ಕಳೆದ 33 ದಿನಗಳಲ್ಲಿ 285 ಹೊಸ ಬ್ಲ್ಯಾಕ್ ಫಂಗಸ್(ಮ್ಯೂಕೋರ್ಮೈಕೋಸಿಸ್ ) ಪ್ರಕರಣಗಳು ವರದಿಯಾಗಿದ್ದು, ಆ.18ಕ್ಕೆ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,836ಕ್ಕೆ ಏರಿಕೆಯಾಗಿದೆ. ಕೋವಿಡ್-19 ಸಂಬಂಧಿತ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಬೆಂಗಳೂರು ನಗರದಲ್ಲಿ 1,207, ಧಾರವಾಡದಲ್ಲಿ 342, ವಿಜಯಪುರ 228, ಕಲಬುರಗಿ 213 ಮತ್ತು ಬಳ್ಳಾರಿ 169 ಪ್ರಕರಣಗಳು ಪತ್ತೆಯಾಗಿವೆ. ಈ ರೋಗದಿಂದ ಉಂಟಾದ ಒಟ್ಟು ಸಾವುಗಳ ಸಂಖ್ಯೆ 441, ಬೆಂಗಳೂರಿನಲ್ಲಿ ಅತಿ ಹೆಚ್ಚು ಅಂದರೆ