ಜನರನ್ನು ಸೆಳೆಯುವ ಸಲುವಾಗಿ ಕೆಲ ರಾಜಕೀಯ ಮುಖಂಡರು ಅಭಿವೃದ್ಧಿ ಮಂತ್ರಿ ಪಠಿಸುತ್ತಾರೆ. ಕಳಪೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿತ್ತಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮಣ್ಣಿನಪಾಲ್ನಲ್ಲಿ 3 ಕೋಟಿ ಖರ್ಚು ಮಾಡಿ ನಿರ್ಮಿಸಲಾದ ರಸ್ತೆ ಮೂರೇ ತಿಂಗಳಿಗೆ ಢಮಾರ್ ಆಗಿದೆ. ಹೊರನಾಡು, ಮಾವಿನಹೊಲ, ಮಣ್ಣಿನ ಪಾಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಈ ರಸ್ತೆಯನ್ನು ನಿರ್ಮಿಸಲಾಗಿತ್ತು.