ಕೋವಿಡ್ ಅಂಟಿಸಿದ ಅಪಖ್ಯಾತಿ ಹೊತ್ತಿದ್ದ ಚೀನಾಗೆ ಈಗ ಕೊರೋನಾ ವೈರಸ್ ತಿರುಗುಬಾಣ ಆಗಿದೆ. ಪ್ರಕರಣಗಳ ವೃದ್ಧಿ ಮಾತ್ರವಲ್ಲ, ನಿತ್ಯ ನೂರಾರು ಸಾವುಗಳು ಸಂಭವಿಸುತ್ತಿವೆ. ಚಿತಾಗಾರಗಳಲ್ಲಿ ಶವಸಂಸ್ಕಾರಕ್ಕೆ ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ಕಡೆ 3 ದಿನ ಶವಗಳನ್ನು ಕ್ಯೂನಲ್ಲಿ ಇರಿಸಬೇಕಾದ ಸ್ಥಿತಿ ಇದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಸದಾ ತನ್ನ ವೈಫಲ್ಯ ಮುಚ್ಚಿಡಲು ಯತ್ನಿಸುವ ಚೀನಾ ಸರ್ಕಾರವು ಕೋವಿಡ್ನಿಂದ ಸಾವಿಗೀಡಾದವರ ಅಧಿಕೃತ ಅಂಕಿಸಂಖ್ಯೆಯನ್ನು ಸರಿಯಾಗಿ ನೀಡುತ್ತಿಲ್ಲ. ಡಿ.4ರಿಂದ ಕೋವಿಡ್