ಹಸಿರು ನಗರ ಮತ್ತು ಸುಸ್ಥಿರ ಪ್ರಯಾಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಎಲೆಕ್ಟ್ರಿಕ್ ಬಸ್ಗಳನ್ನು ಪ್ರಾರಂಭಿಸಿ ಒಂದೂವರೆ ವರ್ಷಗಳು ಕಳೆದಿದೆ. ನಗರದಲ್ಲಿ ಸದ್ಯ 390 ಈ ಎಲೆಕ್ಟ್ರಿಕ್ ಬಸ್ಗಳು ಸಂಚರಿಸುತ್ತಿವೆ. ಈ ಬಸ್ಗಳಲ್ಲಿ ಪ್ರತಿದಿನ ಸರಾಸರಿ 3 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ ಎಂದು ವರದಿಯಾಗಿದೆ.BMTC ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ ಇ-ಬಸ್ಗಳು ನವೀನತೆ, ಸುಸಜ್ಜಿತ ಸೌಕರ್ಯ ಮತ್ತು ಪರಿಸರ ಸ್ನೇಹಿಯಾಗಿವೆ. ಇ-ಬಸ್ಗಳು ಪ್ರತಿದಿನ ಒಟ್ಟು 80,000 ಕಿ.ಮೀ ಕ್ರಮಿಸುತ್ತವೆ.