ಮಂಗಳೂರು: ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಮಂಗಳೂರಿನ ಕೊಣಾಜೆ ಬಳಿಯ ಇನ್ನೋಳಿಯಲ್ಲಿ ನಡೆದಿದೆ. ಮಂಗಳೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಬೆಳ್ತಂಗಡಿಯ ವಿಖಿಲ್(21), ಬಿಹಾರ ಮೂಲದ ಶುಭಂ(22) ಚಿತ್ರದುರ್ಗದ ಮೂಲದ ಶ್ರೀರಾಮ್(21) ಮೃತರು. ಇಂದು ಕಾಲೇಜಿಗೆ ರಜೆ ಇದ್ದ ಕಾರಣ 8 ಮಂದಿ ವಿದ್ಯಾರ್ಥಿಗಳು ಈಜಲೆಂದು ನೇತ್ರಾವತಿ ನದಿಗೆ ಇಳಿದಿದ್ದರು. ಈ ವೇಳೆ ಮೂವರು ನೀರು ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ನದಿಗಿಳಿದು ಐವರು ವಿದ್ಯಾರ್ಥಿಗಳ