ರಾಯಚೂರು : ನಗರದ ಹೊರವಲಯದ ಲಿಂಗಸುಗೂರು ರಸ್ತೆ ಬೈಪಾಸ್ ನಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಕುರಿಗಳಿಗೆ ಕಾರು ಡಿಕ್ಕಿಹೊಡೆದು 30 ಕುರಿಗಳು ಸಾವನ್ನಪ್ಪಿದ್ದು, 10 ಕುರಿಗಳಿಗೆ ಕಾಲು ಮುರಿದಿದೆ.ಕುರಿಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಯಾಪಲದಿನ್ನಿಯ ಜಗನ್ನಾಥ ಎಂಬವರಿಗೆ ಸೇರಿದ ಕುರಿಗಳು ಸಾವನ್ನಪ್ಪಿವೆ.ಯಾಪಲದಿನ್ನಿಯಿಂದ ಕಲ್ಲೂರಿಗೆ ಹೊರಟಿದ್ದ ಕುರಿಗಾಯಿಗಳು, ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ಕುರಿಗಳನ್ನ ನಿಲ್ಲಿಸಿದ್ದರು. ಬೆಳಗ್ಗಿನ ಜಾವ ಅಪಘಾತ ಸಂಭವಿಸಿದ್ದು, 120 ಕುರಿಗಳಲ್ಲಿ 21 ಕುರಿಗಳು ಸಾವನ್ನಪ್ಪಿವೆ. ಅಪಘಾತದಿಂದ