ಕೋವಿಡ್-19 ದಿಂದ ಗುಣಮುಖರಾದ 31 ಜನರನ್ನು ಈವರೆಗೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ವಿಜಯಪುರದಲ್ಲಿ ಆರು ಜನರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಈವರೆಗೆ ಒಟ್ಟು 31 ಕೋವಿಡ್-19 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.50 ವರ್ಷದ ಮಹಿಳೆ ರೋಗಿ ಸಂಖ್ಯೆ 397, 28 ವರ್ಷದ ಪುರುಷ ರೋಗಿ ಸಂಖ್ಯೆ 402, 14 ವರ್ಷದ ಗಂಡು ಮಗು ರೋಗಿ ಸಂಖ್ಯೆ 407, 18 ವರ್ಷದ ಯುವತಿ ರೋಗಿ