ಕಳೆದ ಕೆಲ ವರ್ಷಗಳಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ನಟಿ ಶರಣ್ಯ ಶಶಿ ಅನೇಕ ಸಲ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕರು ಕಂಬನಿ ಮಿಡಿದಿದ್ದಾರೆ. 2012ರಲ್ಲಿ ಬ್ರೈನ್ ಟ್ಯೂಮರ್ಗೆ ಒಳಗಾಗಿದ್ದ ನಟಿಗೆ ಇಲ್ಲಿಯವರೆಗೆ ಒಟ್ಟು 11 ಶಸ್ತ್ರಚಿಕಿತ್ಸೆಗಳಾಗಿದ್ದವು. ಕೋವಿಡ್ ಸೋಂಕಿಗೊಳಗಾದ ಬಳಿಕ ಚೇತರಿಸಿಕೊಂಡಿದ್ದ ಅವರಿಗೆ ಮತ್ತೆ ಅನಾರೋಗ್ಯದ ತೊಂದರೆ ಆರಂಭಗೊಂಡಿತ್ತು. ಹೀಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಲಯಾಳಂನ ಚಕ್ಕೋರಂದಮನ್ ಮತ್ತು ಚೋಟಾ ಮುಂಬೈ ಚಿತ್ರಗಳಲ್ಲಿ