ಕಳೆದ 2 ವಾರಗಳಿಂದ ಇಸ್ರೇಲ್, ಹಮಾಸ್ ಉಗ್ರರ ಮಧ್ಯೆ ನಡೆಯುತ್ತಿರುವ ಯುದ್ಧ ಇನ್ನೂ ಮುಂದುವರೆದಿದೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್ ಸೇನೆ ಏರ್ಸ್ಟ್ರೈಕ್ ಮಾಡುತ್ತಿದ್ರೆ, ಇಸ್ರೇಲ್ ಸೇನೆಯ ಯುದ್ಧ ಟ್ಯಾಂಕರ್ಗಳ ಮೇಲೂ ಉಗ್ರ ಸಂಘಟನೆಗಳು ದಾಳಿ ಮಾಡುತ್ತಿವೆ. ಈ ದಾಳಿ, ಪ್ರತಿದಾಳಿಯಿಂದಾಗಿ ಯುದ್ಧದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಹಮಾಸ್ ವಿರುದ್ಧ ಯುದ್ಧದಲ್ಲಿ ಸಾವನ್ನಪ್ಪಿದರ ವಿವರವನ್ನು ಇಸ್ರೇಲ್ ಸೇನೆ ಪ್ರಕಟ ಮಾಡಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ಇದುವರೆಗೂ 4,651 ಮಂದಿ