ಭಟ್ಕಳಭಟ್ಕಳ ತಾಲೂಕಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆಗೆ ಭಟ್ಕಳದ ಚೌಥನಿ ನದಿ ಉಕ್ಕಿ ಹರಿಯುತ್ತಿದ್ದು, ತಾಲೂಕಿನ ಬಹುತೇಕ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಿದೆ. ಮೂಢ ಭಟ್ಕಳ ಬೈಪಾಸ್ನಿಂದ ಮುಟ್ಟಳ್ಳಿಗೆ ಸಂಪರ್ಕಿಸುವ ರಸ್ತೆಯೂ ಸಂಪೂರ್ಣ ಜಲಾವೃತಗೊಂಡಿದೆ. ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಮೂಢ ಭಟ್ಕಳ ಬೈಪಾಸ್ ಸೇರಿದಂತೆ ಅನೇಕ ಗ್ರಾಮಗಳು ಮಳೆಗೆ ಮುಳುಗಡೆಯಾಗಿದೆ. ಜಲಾವೃತಗೊಂಡಿರುವ ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮಾಡುತ್ತಿದ್ದಾರೆ. ಮಣ್ಕುಳಿಯಿಂದ