ಬೆಂಗಳೂರು : ಶುಕ್ರವಾರ ನಡೆದ ರಾಜ್ಯಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಲ್ವರು ಶಾಸಕರು ಚಲಾಯಿಸಿದ ಮತಗಳು ಅಸಿಂಧುಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನ ನಾಲ್ವರ ಶಾಸಕರು ಚಲಾಯಿಸಿದ್ದ 4 ಮತಗಳು ಅಸಿಂಧುಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಾಚಿಕೆಯಾಗಬೇಕಾದ ಸಂಗತಿ. ಸಿದ್ದರಾಮಯ್ಯ ಮೇಲೆ ಕಾಂಗ್ರೆಸ್ ಶಾಸಕರಿಗೆ ನಂಬಿಕೆಯಿಲ್ಲ. ಯಾಕೆ 4 ಮತ ಇನ್ ವ್ಯಾಲಿಡ್ ಎಂಬುದನ್ನು ತಿಳಿಸಬೇಕು