ಬೀದರ್: ಕಾರು ಪಲ್ಟಿಯಾದ ಪರಿಣಾಮ ಹಸೆಮಣೆ ಏರಬೇಕಿದ್ದ ಜೋಡಿ ಸೇರಿ ನಾಲ್ವರು ದುರ್ಮರಣಕ್ಕೀಡಾಗಿರುವ ಘಟನೆ ಹುಮ್ನಾಬಾದ್ ತಾಲೂಕು ಬಸವಂತಪುರ ಬಳಿ ನಡೆದಿದೆ. ಪ್ರಿಯಾ(22), ಹಣಮಂತ(23), ಸಾವಿತ್ರಿ(45), ಅನುಸೂಯ(50) ಮೃತಪಟ್ಟಿದ್ದು, ಸುಲೋಚನಾ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದೀರ ನಿವಾಸಿಗಳು ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಮೃತಪಟ್ಟ ಪ್ರಿಯಾ ಹಾಗೂ ಹಣಮಂತಗೆ ಮುಂದಿನ ತಿಂಗಳು ಮದುವೆ ನಿಗದಿಯಾಗಿತ್ತು. ಹೀಗಾಗಿ ಕಲಬುರಗಿ ಜಿಲ್ಲೆಯ ದೇವಲಗಾಣಗಾಪುರದಲ್ಲಿರುವ